ಚಂದ್ರಿಕೆಯಲೆನ್ನ ಮಿಂದು ಬಂದಿಹುದಣ್ಣ ಎಂದಳಾನಂದದಲಿ ನನ್ನ ತಂಗಿ ಮಲ್ಲಿಗೆಯ ಬಳ್ಳಿಯಲಿ ಮಲ್ಲಿಗೆಯ ಹೂ ಬಿಡುವು- ದೇನು ಸೋಜಿಗವಲ್ಲ ಎಂದೆ ನಾನು ಬಣ್ಣದಲಿ ನನ್ನಂತೆ; ಮುಖವೆಲ್ಲ ಅವರಂತೆ ಎಂದಳುತ್ಸಾಹದಲಿ ನನ್ನ ತಂಗಿ ಹೊರಗಿದ್ದ ಭಾವನವರಿದ ಕೇಳಿ 'ಇದರ ಮುಖ ಯಾರಂತೆ? ಮತ್ತೊಮ್ಮೆ!' ಎಂದರಾಗ ## ಹಂಚಿಕೊಳ್ಳಿ: ಗೀತವಿಹಾರಕ್ಕೆ ಹಿಂತಿರುಗಿ